ಬೆನಗಲ್ ಶಿವ ರಾವ್ (೨೬ ಫೆಬ್ರವರಿ ೧೮೯೧ - ೧೫ ಡಿಸೆಂಬರ್ ೧೯೭೫) ಒಬ್ಬ ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ. ಇವರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು ಮತ್ತು ಮೊದಲ ಲೋಕಸಭೆಯಲ್ಲಿ ದಕ್ಷಿಣ ಕೆನರಾ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾಗಿದ್ದರು (ನಂತರ ಇದನ್ನು ಮಂಗಳೂರು ಎಂದು ಹೆಸರಿಸಲಾಗಿದೆ, ಪ್ರಸ್ತುತ ದಕ್ಷಿಣ ಕನ್ನಡ ). ಇವರು ದಿ ಹಿಂದೂ ಮತ್ತು ಮ್ಯಾಂಚೆಸ್ಟರ್ ಗಾರ್ಡಿಯನ್‌ನ ವರದಿಗಾರರಾಗಿದ್ದರು. ಇವರು ೧೯೫೭ - ೧೯೬೦ ವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಇವರು ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದಿದ್ದಾರೆ. == ಜೀವನಚರಿತ್ರೆ == ಬಿ. ಶಿವ ರಾವ್ ಅವರು ಮಂಗಳೂರಿನಲ್ಲಿ ೨೬ ಫೆಬ್ರವರಿ ೧೮೯೧ ರಂದು ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಬಿ. ರಾಘವೇಂದ್ರ ರಾವ್, ಹೆಸರಾಂತ ವೈದ್ಯರಾಗಿದ್ದರು. ಇವರ ಹಿರಿಯ ಸಹೋದರರು ಬೆನಗಲ್ ನರಸಿಂಗ್ ರಾವ್ ಮತ್ತು ಬೆನಗಲ್ ರಾಮರಾವ್. ಇವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ನಂತರ ಕಾರ್ಮಿಕ ಚಳುವಳಿಯನ್ನು ಸೇರಿಕೊಂಡು ಐ.ಎನ್.ಟಿ.ಯು.ಸಿ ಯ ಉಪಾಧ್ಯಕ್ಷರಾಗಿದ್ದರು. ಇವರು ೧೯೨೯ ರಲ್ಲಿ ಆಸ್ಟ್ರಿಯಾದ ಕಿಟ್ಟಿ ವರ್ಸ್ಟಾಂಡಿಗ್ ಅವರನ್ನು ವಿವಾಹವಾದರು. ತಮ್ಮ ಜೀವನದ ಆರಂಭದಲ್ಲಿ, ಇವರು ಥಿಯಾಸಾಫಿಕಲ್ ಸೊಸೈಟಿ ಮತ್ತು ಅದರ ನಾಯಕಿ ಅನ್ನಿ ಬೆಸೆಂಟ್‌ನ ಪ್ರಭಾವಕ್ಕೆ ಒಳಗಾದರು. ಹಾಗೆಯೇ ದಿ ಹಿಂದೂ ಮತ್ತು ಮ್ಯಾಂಚೆಸ್ಟರ್ ಗಾರ್ಡಿಯನ್ ವರದಿಗಾರರಾಗಿದ್ದರು. ಇವರು ಫ್ರೇಮಿಂಗ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ (ಆರು ಸಂಪುಟಗಳಲ್ಲಿ, ೧೯೬೮) ಎಂಬ ಕೃತಿಗೆ ಹೆಸರುವಾಸಿಯಾಗಿದ್ದಾರೆ. ಇವರು ಗಾಂಧಿಯ ಕಟ್ಟಾ ಅಭಿಮಾನಿಯಾಗಿದ್ದರು ಆದರೆ ರಾಷ್ಟ್ರೀಯ ಚಳುವಳಿಗಾಗಿ ಅವರ ಕಾರ್ಯತಂತ್ರವನ್ನು ಟೀಕಿಸಿದವರಲ್ಲಿ ಮೊದಲಿಗರು. ಇವರ ವಸ್ತುನಿಷ್ಠತೆ ಮತ್ತು ಆಳವಾದ ವಿಶ್ಲೇಷಣೆಯು ನೆಹರು, ಗಾಂಧಿ ಮತ್ತು ಎಸ್. ರಾಧಾಕೃಷ್ಣನ್ ಸೇರಿದಂತೆ ಇನ್ನು ಹಲವು ಓದುಗರಿಗೆ ಇಷ್ಟವಾಯಿತು. ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯಲ್ಲಿ ಇವರ ಭಾಗವಹಿಸುವಿಕೆಯು ಸ್ವಾತಂತ್ರ್ಯದ ನಂತರ ಯುಎನ್ ಮತ್ತು ಐಎಲ್ಒ ಗೆ ಪ್ರತಿನಿಧಿಯಾಗಿ ಮುಂದುವರೆಯಲು ಸಾಧ್ಯವಾಯಿತು. ಅಲ್ಲಿ ಇವರು ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಮತ್ತು ಬಾಬು ಜಗಜೀವನ್ ರಾಮ್ ಅವರೊಂದಿಗೆ ಕೆಲಸ ಮಾಡಿದರು. ಅವರು ೧೯೫೨-೫೭ ರವರೆಗೆ ಲೋಕಸಭೆ ಮತ್ತು ೧೯೫೭ – ೧೯೬೦ ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ನಂತರ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಿ ಸಂಶೋಧನೆಯತ್ತ ಗಮನ ಹರಿಸಿದರು. ತಮ್ಮ ಸಹೋದರ ಬಿಎನ್ ರಾವ್ ಅವರ ಲೇಖನಗಳನ್ನು ಇಂಡಿಯಾಸ್ ಕಾನ್‌ಸ್ಟಿಟ್ಯೂಷನ್ ಇನ್ ಮೇಕಿಂಗ್ (೧೯೬೦) ಎಂದು ಸಂಪಾದಿಸಿದ್ದಾರೆ. ಅವರು ಸಿರಿಲ್ ಹೆನ್ರಿ ಫಿಲಿಪ್ಸ್‌ಗೆ ಮತ್ತು ಮೇರಿ ಡೋರೀನ್ ವೈನ್‌ರೈಟ್ ಅವರೊಂದಿಗೆ ದಿ ಪಾರ್ಟಿಷನ್ ಆಫ್ ಇಂಡಿಯಾ: ಪಾಲಿಸೀಸ್ ಮತ್ತು ಪರ್ಸ್ಪೆಕ್ಟಿವ್ಸ್ ೧೯೩೫-೪೭ಅನ್ನು ಸಂಪಾದಿಸಿದ್ದಾರೆ. ಅವರ ಕೊನೆಯ ಕೃತಿ ಇಂಡಿಯಾಸ್ ಫ್ರೀಡಂ ಫೈಟರ್ಸ್: ಸಮ್ ನೊಟೇಬಲ್ ಫಿಗರ್ಸ್ ಇದು ೧೯೭೨ ರಲ್ಲಿ ಪ್ರಕಟವಾಯಿತು. ==== ಅವರ ಇತರ ಕೃತಿಗಳು ==== ವಾಟ್ ಲೇಬರ್ ಹ್ಯಾಸ್ ಗೇನ್ಡ್ ಫ್ರಮ್ ರಿಫಾರ್ಮ್ ಇನ್ ಇಂಡಿಯಾ (೧೯೨೩) ದಿ ಪ್ರಾಬ್ಲಮ್ ಆಫ್ ಇಂಡಿಯಾ (೧೯೨೬), ಡೇವಿಡ್ ಗ್ರಹಾಂ ಪೋಲ್ ಜೊತೆಯಲ್ಲಿ ಬರೆದಿದ್ದಾರೆ ಸೆಲೆಕ್ಟ್ ಕಾನ್‌ಸ್ಟಿಟ್ಯೂಷನ್ ಆಫ್ ದ ವಲ್ಡ್ (೧೯೩೪) ಇಂಡಸ್ಟ್ರಿ‌ಯಲ್ ವರ್ಕರ್ ಇನ್ ಇಂಡಿಯಾ (೧೯೩೯) ಇಂಡಿಯಾಸ್ ಫ್ರೀಡಮ್ ಸ್ಟ್ರಗಲ್:ಸಮ್ ಆಸ್ಪೆಕ್ಟ್ಸ್ (೧೯೬೮) ಇಂಡಿಯಾ ಗೋಸ್ ಟು ದಿ ಪೋಲ್ಸ್ (೧೯೬೮) ಇಂಡಿಯಾಸ್ ರೋಲ್ ಇನ್ ಯುಎನ್ (೧೯೬೮), ಅವರು ೧೯೪೭, ೧೯೪೮, ೧೯೪೯ ಮತ್ತು ೧೯೫೦ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನಗಳಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸಿದ್ದಾರೆ. ೧೯೭೫ರ ಡಿಸೆಂಬರ್ ೧೫ ರಂದು ಅವರು ನವದೆಹಲಿಯಲ್ಲಿ ನಿಧನರಾದರು. == ಉಲ್ಲೇಖಗಳು ==